Call Us :
+91 96860 00046
+91 0824 2230452
info@shakthi.edu.in

ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ  ಕ್ಯಾ. ಮುಲ್ಕಿ ಗಣೇಶ ರಾವ್­ಗೆ ಸನ್ಮಾನ

ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ವತಿಯಿಂದ 72 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಶಕ್ತಿ ಶಾಲೆಯ ಮೈದಾನದಲ್ಲಿ ಧ್ವಜಾರೋಹಣದೊಂದಿಗೆ ಆಯೋಜಿಸಲಾಯಿತು. ಧ್ವಜಾರೋಹಣವನ್ನು ಕ್ಯಾ. ಮುಲ್ಕಿ ಗಣೇಶ ರಾವ್ ನೆರೆವೇರಿಸಿ ಧ್ವಜ ವಂದನೆಯನ್ನು ಸಲ್ಲಿಸಿದರು.

ಶಕ್ತಿ ಶಾಲೆಯ ವತಿಯಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ ನಾಯ್ಕ್ ವಹಿಸಿದರು. ಈ ಸಂದರ್ಭದಲ್ಲಿ ಕ್ಯಾ. ಮುಲ್ಕಿ ಗಣೇಶ ರಾವ್ ಇವರು ಸೈನ್ಯದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಅವರಿಗೆ ಸನ್ಮಾನವನ್ನು ಶಕ್ತಿ ವಸತಿ ಶಾಲೆಯ ಸಂಚಾಲಕರಾದ ಶ್ರೀ ಸಂಜೀತ್  ನಾಯ್ಕ್ ಮತ್ತು ಆಡಳಿತ ಮಂಡಳಿ ಸದಸ್ಯ ಸಗುಣ ಸಿ. ನಾಕ್ ಮಾಡಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕ್ಯಾ. ಮುಲ್ಕಿ ಗಣೇಶ್ ರಾವ್ 1965 ರ ಪಾಕಿಸ್ಥಾನ ಮತ್ತು ಭಾರತದ ನಡುವಿನ ಯುಧ್ಧದಲ್ಲಿ ತಾವು ಸ್ವತಃ ಭಾಗವಹಿಸಿದ ನೆನಪುಗಳನ್ನು ಮೆಲುಕು ಹಾಕಿದರು. ಸ್ವತಂತ್ರ ಭಾರತ ನಿರ್ಮಾಣವಾದ ನಂತರವು ನಾವು ಅನೇಕ ಯುದ್ಧಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಇದಕ್ಕೆ ನಮ್ಮ ಹಿಂದಿನ ಆಡಳಿತ ವ್ಯವಸ್ಥೆಯು ಕಾರಣವಾಗಿರಬಹುದು ಎಂಬ ವಿಚಾರವನ್ನು ತಿಳಿಸಿದರು. ಇಂದಿನ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಬರಬೇಕು. ನಮ್ಮ ದೇಶವನ್ನು ನಾವು ಪ್ರೀತಿಸಬೇಕೆಂದು ಕರೆ ನೀಡಿದರು. ನಂತರ ಸ್ವಾತಂತ್ರೋತ್ಸವದ ನಿಮಿತ್ತ ನಡೆದ ಅನೇಕ ಕಾರ್ಯಕ್ರಮದಲ್ಲಿ ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಮಧುಲಿಕಾ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಪ್ರಭಾಕರ ಜಿ. ಎಸ್ ಸ್ವಾತಂತ್ರ್ಯದ ಸಂದೇಶವನ್ನು ನೀಡಿದರು.

ಈ ಸಂದರ್ಭದಲ್ಲಿ ಶಕ್ತಿ ವಸತಿ ಶಾಲಾ ಮಕ್ಕಳು ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಹಾಗೂ ಶಕ್ತಿ ಪ ಪೂ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಕ್ತಿ ಶಾಲೆಯ ಸಂಚಾಲಕ ಶ್ರೀ ಸಂಜೀತ್ ನಾಕ್, ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಸಗುಣ ಸಿ. ನಾಕ್, ಟ್ರಸ್ಟಿ ಶ್ರೀ ಮರುಳೀಧರ್ ನಾಕ್, ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ, ಸಂಸ್ಥೆಯ ಆಭಿವೃದ್ಧಿ ಅಧಿಕಾರಿ ಶ್ರೀಮತಿ ನಸೀಮ್ ಬಾನು, ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಬೈಕಾಡಿ ಜನಾರ್ದನ ಆಚಾರ್, ನಿರೂಪಣೆಯನ್ನು ಪ್ರಿಯಾಂಕ ಹಾಗೂ ವಂದನಾರ್ಪಣೆಯನ್ನು ವಿದ್ಯಾರ್ಥಿ ರಾಹಿಲ್ ನೆರೆವೇರಿಸಿದರು.

About School

Shakthi Preschool

Welcome to Shakthi Preschool, a progressive year-round preschool providing a...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...