The ongoing pandemic and the resultant lockdown has been difficult for everyone. More so for parents who are suddenly scrambling for resources to keep their kids engaged in productive activities. With schools shut, children are also bound to feel more agitated and confused than ever, causing them to react in ways that may be new for parents. The teacher’s of Shree Gopalkrishna Pre-School have poured in all their time and efficiency to design creative worksheets and craft work to keep their kids engaged and also to keep in touch with the School said Dr. K.C.Naik, the Managing Trustee, speaking on the occasion of the release of the second activity kit from school.
A very young child has an emotional attachment towards his caregivers i.e. the parents or the guardians. When he starts to school, he also seeks to obtain the same feeling of attachment from his teachers. This relationship of attachment of emotions between the teachers and their students affects the cognitive and non-cognitive characteristics of students at the early stage of their development. This attachment helps the young students to obtain a secure learning experience. The adequate experiences of this attachment can lead to the achievement of skills in the students resulting in the development of cognitive characteristics of students. The present scenario has separated the kids from teachers but Shree Gopalakrishna Pre-School has taken all possible initiatives to retain this bond. The teacher’s have personally put in all creativity and brought up their emotions in the form of a kit, which would be delivered to the kids house with utmost precautions and safety measures, opined Neema Saxena, the Co-ordiantor of Shree Gopalalkrishna Pre-school, Shakthinagar.
Ramesh K,Chief Advisor, Prakyath Rai, Institute Development Officer, Prabhakara G.S, Principal, Shakthi PU College, Vidya Kamath, Principal, Shakthi Residential School and the staff of Shree GopalaKrishna Pre-school were present.
ಕೋವಿಡ್-19 ರ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ವಿನೂತನವಾಗಿ ಕೌಶಲ್ಯಧಾರಿತವಾಗಿ ಅಧ್ಯಯನ ನಡೆಸುವ ವಿಧಾನಕ್ಕೆ ಚಾಲನೆ
ಮಂಗಳೂರು : ಶಕ್ತಿನಗರದ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ. ಮತ್ತು ಯು. ಕೆ. ಜಿ. ವಿದ್ಯಾರ್ಥಿಗಳನ್ನು ಕೋವಿಡ್-19 ರ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಅವರನ್ನು ತಮ್ಮ ಮನೆಯಲ್ಲಿ ಅಧ್ಯಯನ ನಡೆಸುವ ವಿನೂತನ ವಿಧಾನಕ್ಕೆ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಕೆ. ಸಿ. ನಾೖಕ್ ಇಂದು ಚಾಲನೆ ನೀಡಿದರು. ಅಧ್ಯಾಪಕರು ವಿದ್ಯಾರ್ಥಿಗಳನ್ನು ಭಯ ಮುಕ್ತರನ್ನಾಗಿ ಸಿದ್ಧಗೊಳಿಸುವ ಯೋಜನೆಗೆ ಪೋಷಕರು ಶ್ಲಾಘನೆ ವ್ಯಕ್ತ ಪಡಿಸಿದರು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಕೆ. ಸಿ. ನಾೖಕ್ ಮಾತನಾಡಿ ಇದೊಂದು ಕ್ರಿಯಾತ್ಮಕವಾದ ವಿಧಾನವಾಗಿದೆ ವಿದ್ಯಾರ್ಥಿಗಳನ್ನು ವಿದ್ಯೆಯ ಜೊತೆ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ವರ್ಕ್ ಶೀಟ್ ಮತ್ತು ಇತರೆ ಕಲಿಕೆಯ ವಸ್ತುಗಳನ್ನು ವಿದ್ಯಾರ್ಥಿಗಳ ಮನೆಗೆ ತಲುಪಿಸುವ ಮೂಲಕ ಅವರನ್ನು ಸಿದ್ಧಗೊಳಿಸುವ ಯೋಜನೆ ಇದಾಗಿದೆ ಎಂದು ಹೇಳಿದರು.
ಪೋಷಕರ ಪ್ರೀತಿಯಿಂದ ಬೆಳೆದಿರುವ ಮಕ್ಕಳು ಶಾಲೆಯಲ್ಲಿ ಶಿಕ್ಷಕರ ಆತ್ಮೀಯತೆಯನ್ನು ಬಯಸುತ್ತಾರೆ. ಇಂತಹ ಕೋವಿಡ್-19 ರ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕರು ವಿನೂತನವಾದ ಯೋಜನೆಯನ್ನು ತಯಾರು ಮಾಡಿ ಮಕ್ಕಳಿಗೆ ಯಾವುದೇ ತರದ ತೊಂದರೆಯಾಗಬಾರದು ಎಂಬ ಉದ್ದೇಶದೊಂದಿಗೆ ಅವರ ಆತ್ಮಸ್ಥೆರ್ಯ ಹೆಚ್ಚಿಸುವ ಕೌಶಲ್ಯ ಆಧಾರಿತ ವಿಧಾನವನ್ನು ಪರಿಚಯಿಸಿದರು. ಇದು ಮಕ್ಕಳ ಬೆಳವಣಿಗೆಗೆ ಪೂರಕವಾಗುವುದರ ಜೊತೆ ಮಕ್ಕಳು ಮನೆಯಿಂದ ಹೊರಗಡೆ ಬಾರದ ಹಾಗೆ ನೋಡಿಕೊಳ್ಳಲು ಉಪಯುಕ್ತವಾಗಲಿದೆ ಎಂದು ಸಂಸ್ಥೆಯ ಸಂಚಾಲಕಿ ನೀಮಾ ಸಕ್ಸೇನಾ ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಪ್ರಧಾನ ಸಲಹೆಗಾರ ರಮೇಶ್ ಕೆ, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ ಕಾಮತ್, ಶಕ್ತಿ ಪ.ಪೂ. ಕಾಲೇಜು ಪ್ರಾಂಶುಪಾಲರಾದ ಪ್ರಭಾಕರ ಜಿ. ಎಸ್., ಮತ್ತು ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಎಲ್ಲಾ ಶಿಕ್ಷಕಿಯರು ಉಪಸ್ಥಿತರಿದ್ದರು.