Call Us :
+91 96860 00046
+91 0824 2230452
info@shakthi.edu.in

ವಾರ್ಷಿಕೋತ್ಸವದ ಉದ್ಘಾಟನಾ ಕಾರ್ಯಕ್ರಮ 2022

ಮಂಗಳೂರು ಡಿ. 16 : ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಮತ್ತು ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ ನಂದಗೋಪಾಲ ಶೆಣೈ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ಇದನ್ನು ಸಮರ್ಪಕವಾಗಿ ಅಳವಡಿಸಿದಾಗ ಮಕ್ಕಳ ಬೆಳವಣಿಗೆ ಸಾಧ್ಯವೆಂದು ಅವರು ಹೇಳಿದರು. ಮಗುವಿನಂತಹ ಮನಸ್ಸನ್ನು ನಾವೆಲ್ಲರೂ ಹೊಂದಬೇಕು. ಏಕೆಂದರೆ ಮಗು ಯಾವಾಗಲು ಪ್ರಶ್ನೆ ಮಾಡುವ ಗುಣವನ್ನು ಹೊಂದಿರುತ್ತದೆ.

ಕಲಿಕೆ ಎಂಬುವುದು ಒಂದು ನಿರಂತರ ಪ್ರಕ್ರಿಯೆಯಾಗಿದೆ. ಈ ಮನಸ್ಥಿತಿಯನ್ನು ಎಲ್ಲರೂ ಜೀವನದುದ್ದಕ್ಕೂ ಅಳವಡಿಸಬೇಕೆಂದು ಹೇಳಿದರು. ನಾವು ಕನಸು ಕಾಣಬೇಕು ಆದರೆ ಕನಸು ಜೀವನವನ್ನು ಬದಲಾವಣೆ ಮಾಡದಿದ್ದರು ಇಚ್ಛೆ ಮಾತ್ರ ಜೀವನವನ್ನು ಬದಲಾಯಿಸುತ್ತದೆ. ಆದರೆ ಪರಿಶ್ರಮ ನಿರಂತರವಾಗಿದ್ದಾಗ ಅದು ಸಂಪೂರ್ಣ ಜೀವನವನ್ನೆ ಬದಲಾಯಿಸುತ್ತದೆ. ನಮ್ಮೆಲ್ಲರಲ್ಲಿ ಸಮರ್ಪಣಾ ಮನೋಭಾವನೆ ನಿರಂತರವಾಗಿರಬೇಕೆಂದು ಅವರು ಕರೆ ನೀಡಿದರು. ಮಕ್ಕಳಲ್ಲಿ ಆಹಾರವನ್ನು ಎಸೆಯುವ ಗುಣವನ್ನು ಶೂನ್ಯಕ್ಕೆ ತರುವಲ್ಲಿ ಪೋಷಕರು ಪ್ರಯತ್ನಪಡಬೇಕು. ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಸ್ಥಿತಿ ಮುಂದೆ ಸಮಾಜದಲ್ಲಿ ಬರಬಾರದೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಆಡಳಿತಾಧಿಕಾರಿ ಡಾ. ಕೆ.ಸಿ ನಾಕ್ ಮಾತನಾಡಿ ಶಕ್ತಿ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಶಿಕ್ಷಣವನ್ನು ಕೊಡುವುದರ ಮೂಲಕ ದೇಶ ಪ್ರೇಮಿಗಳನ್ನಾಗಿ ಮಾಡುವುದು ನಮ್ಮ ಮೊದಲ ಉದ್ದೇಶವೆಂದು ಹೇಳಿದರು. ಈ ಉದ್ದೇಶವು ಸಾಕಾರಗೊಳ್ಳುತ್ತ ಬರುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಶ್ರೀ ಸಂಜೀತ್ ನಾಕ್ ಮಾತನಾಡಿ ಶಕ್ತಿ ಶಿಕ್ಷಣ ಸಂಸ್ಥೆಯು ಮಕ್ಕಳಲ್ಲಿ ಸಂಸ್ಕಾರ ಕೊಡುವ ಕಾರ್ಯವನ್ನು ವಿದ್ಯಾಭಾರತಿ ಮೂಲಕ ಮಾಡುತ್ತಿದೆ. ಇದರ ಜೊತೆಗೆ ಸಂಸ್ಕೃತವನ್ನು ಎಲ್ಲರಿಗೂ ಕಲಿಸುವ ಕಾರ್ಯವನ್ನು ಮಾಡಿದೆ. ಇದು ವಿದ್ಯಾರ್ಥಿಗಳಲ್ಲಿ ಆತ್ಮ ಶಕ್ತಿಯನ್ನು ವೃದ್ಧಿಸುವ ಒಂದು ಪ್ರಯತ್ನವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ಪೆಟ್ರಿಷಿಯ ಪಿಂಟೊ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ನೆರವೇರಿತು.

Annual day Program of Primary School Children of Shakthi Pre Primary and Shakthi Residential School

Mangalore D. 16: The Annual day program of Shakthi Pre- School and Shakthi Primary School of Shakthinagar was inaugurated by lighting the lamp by the President of Vishwa Konkani Kendra, CA Nandagopal Shenoy. Later he said that, It is commendable that the education policy of the nation is being implemented for the all-round development of students. He said that when it is properly implemented, the development of children is possible. We should all have a childlike mind. Because a child always has curiosity and learning is a continuous process.

He said that everyone should adopt this mentality throughout life. We have to dream but dreams don’t change life only desire changes life. But when perseverance is sustained it changes the entire life. He called for continuous dedication in all of us. Parents should try to bring the habit of throwing away food to zero in children. The situation of struggling for even one meal should not arise in the society. Dr. K.C Naik administrator present on the stage said that Shakthi Education Institute’s first objective is to make students patriots by imparting nationalistic education. He said that this objective is being realized.

Mr. Sanjith Naik, secretary of the organization presided over the program and said that Shakthi Education Institute is doing the work of imparting samskra to children through Vidyabharati. In addition to this, we have done the work of teaching Sanskrit to everyone. He said that this is an attempt to increase the spirit of the students.

Chief Advisor Ramesh K., Prithviraj Principal of Shakthi PU College, Vidya Kamath G. Principal of Shakthi Residential School, Patricia Pinto, Coordinator of Shakthi Pre School were present on the occasion. Cultural programmes were performed after the formal function.

About School

Shakthi Preschool

Welcome to Shakthi Preschool, a progressive year-round preschool providing a...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...