Call Us :
+91 96860 00046
+91 0824 2230452
info@shakthi.edu.in

ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ ಶಕ್ತಿ ವಸತಿಯುಕ್ತ ಶಾಲೆಯ ವಾರ್ಷಿಕೋತ್ಸವ

ಮಂಗಳೂರು ಡಿ 23: ಶಕ್ತಿನಗರದ ಶ್ರೀ ಗೋಪಾಕೃಷ್ಣ ಪೂರ್ವ ಪ್ರಾಥಮಿಕ ಶಾಲೆ ಶಕ್ತಿ ವಸತಿಯುಕ್ತ ಶಾಲೆಯ ವಾರ್ಷಿಕೋತ್ಸವದ ಕಾರ್ಯಕ್ರಮವು ನಗರದ ಶಕ್ತಿ ವಸತಿ ಶಾಲೆಯ ಮೈದಾನದಲ್ಲಿ ಶನಿವಾರ ಸಂಜೆ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉಡುಪಿಯ ಡಾ. ಟಿ.ಎಂ.ಎ ಪೈ ಕಾಲೇಜಿನ ಸಂಯೋಜಕ ಡಾ. ಮಹಾಬಲೇಶ್ವರರಾವ್ ಉದ್ಘಾಟಿಸಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಶಕ್ತಿ ವಸತಿಯುಕ್ತ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ರಾಜ್ಯದ ವಿವಿಧ ಕಡೆಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದುಅವರಿಗೆ ಮಾನವೀಯ ಮೌಲ್ಯ, ವಿವೇಕಗಳು ಬೆಳೆಸುವಂತಹ ಕೆಲಸವಾಗಬೇಕು ಎಂದು ತಿಳಿಸಿದರು.

ಸಾಮಾಜಿಕ ಪದ್ದತಿ, ಆಚಾರ-ವಿಚಾರಗಳು, ಆಲೋಚನಾ ರೀತಿಗಳೇ ಆಧುನಿಕೋತ್ತರ ಜಗತ್ತಿನಲ್ಲಿ ಸಾಕಷ್ಟು ಬದಲಾಗಿದೆ. ಹಿರಿಯರು ಹಿಂದಿನ ಕಾಲಕ್ಕೆ ಹೋಗಿ ಆಲೋಚಿಸಿದರೆ, ಆಗಿನ ಕಾಲದಲ್ಲಿ ವಿದ್ಯಾಭ್ಯಾಸ ಮಾಡುವ ಕ್ರಮಕ್ಕೂ ಇಂದಿನ ಕಾಲದಲ್ಲಿ ವಿದ್ಯಾಭ್ಯಾಸ ಮಾಡುವ ಕ್ರಮಕ್ಕೂಅಜಗಜಾಂತರ ವ್ಯತ್ಯಾಸವಿದೆ. ಕರಾವಳಿ ಪ್ರದೇಶದಲ್ಲಿ ಶಿಕ್ಷಣ ಪಡೆಯುವುದೇ ಕಷ್ಟಕರ ಎನ್ನುವ ದಿನಗಳಿದ್ದವು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಬಡತನವಿತ್ತು. ವಿದ್ಯುಚ್ಛಕ್ತಿಯ ಸೌಲಭ್ಯ ಮೊದಲೇ ಇರಲಿಲ್ಲ. ಸದ್ಯ ಅಂತಹ ಯಾವುದೇ ತೊಂದರೆಯಿಲ್ಲ. ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕವಾಗಿ ಹೊಸ ಹೊಸ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುತ್ತದೆ. ಹಿಂದಿನ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳೇ ಕಡಿಮೆ. ಉನ್ನತ ಶಿಕ್ಷಣ ಪಡೆಯಲು ಬೆಂಗಳೂರು, ಹೈದರಾಬಾದ್, ಚೆನೈ ಮತ್ತಿತರ ಬೃಹತ್ ನಗರಗಳಿಗೆ ತೆರಳಬೇಕಾಗಿತ್ತು. ವಿದ್ಯಾಭ್ಯಾಸ ಮಾಡಲು ಬೇಕಾದ ಆರ್ಥಿಕ ಬಲವು ಕಡಿಮೆಯಿತ್ತು. ಇಂತಹ ಕಷ್ಟಗಳನ್ನು ಅನುಭವಿಸಿದ್ದರಿಂದಲೇ ಬದುಕನ್ನುಎದುರಿಸಲು ಸವಾಲು, ಧೈರ್ಯ ಎದೆಗುಂದದ ಮನೋಭಾವದಿಂದ ಶಿಕ್ಷಣ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಬಗ್ಗೆ ತಮ್ಮ ಕಾಲೇಜು ಶಿಕ್ಷಣದ ದಿನಗಳನ್ನು ನೆನಪಿಸಿಕೊಂಡರು.

ಸರಕಾರದಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ಸಮವಸ್ತ್ರ, ಬಿಸಿಯೂಟ, ಕಬ್ಬಿಣದ ಮಾತ್ರೆ ವೈದ್ಯಕೀಯ ಸುಶ್ರೂಷೆ, ಪಠ್ಯಪುಸ್ತಕ, ಸೈಕಲ್ ಶೂ, ಸಾಕ್ಸ್, ಶಿಷ್ಯ ವೇತನಗಳಂತಹ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಆದರೂ ವಿದ್ಯಾರ್ಥಿಗಳ ಕಲಿಕೆಯಲ್ಲಿ ನಿರಾಶಾಭಾವ ವ್ಯಕ್ತವಾಗುತ್ತಿದೆ. ಈಗಿನ ಶಾಲಾ ಮಕ್ಕಳು ಮೂರು ಭಾಷೆಗಳನ್ನು ಕಲಿಯುತ್ತಾರೆ ಆದರೆ ಅವರಲ್ಲಿ ಸಂವಹನದ ಕೊರತೆ ಇದೆ ಎಂದು ಅವರು ಹೇಳಿದರು.

ಜನದಟ್ಟಣೆಯಿಂದ ದೂರವಾಗಿ ಪ್ರಶಾಂತ ವಾತಾವರಣದಿಂದ ಕೂಡಿದ ಪ್ರದೇಶದಲ್ಲಿ ಶಕ್ತಿ ವಿದ್ಯಾ ಸಂಸ್ಥೆಗಳನ್ನು ಕಟ್ಟಿದ ಸಂಸ್ಥೆಯ ಸಂಸ್ಥಾಪಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಮಂಗಳೂರು ಕ್ಯಾಂಪ್ಕೋದ ನಿರ್ದೇಕರಾದ ಕೃಷ್ಣಪ್ರಸಾದ್‌ ಮಾಡ್ತಿಲ ಮಾತನಾಡಿ ಒಂದು ಸಂಸ್ಥೆ ಅತಿಎತ್ತರಕ್ಕೆ ಏರಬೇಕಾದರೆ ಅಲ್ಲಿ ಹೆತ್ತವರ ಪಾತ್ರ ಮುಖ್ಯಎಂದು ಹೇಳಿದರು. ಇಂತಹ ಶಿಕ್ಷಣ ಸಂಸ್ಥೆಯಿಂದ ವಿದ್ಯಾರ್ಥಿಗಳ ಸರ್ವತೋಮುಖಅಭಿವೃದ್ಧಿ ಸಾಧ್ಯವಿದೆ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಶಿಕ್ಷಣ ಇಲ್ಲಿ ಲಭಿಸಲಿ ಎಂದು ಅವರು ಹಾರೈಸಿದರು.

ಎಂಆರ್‌ಪಿಎಲ್‌ನ ಮಾಜಿಉಪಾಧ್ಯಕ್ಷರಾದ ವಿ.ಕೆ ತಾಳಿತ್ತಾಯ ಮಾತನಾಡಿ ಶಕ್ತಿ ಶಿಕ್ಷಣ ಸಂಸ್ಥೆ ಅಂತರಾಷ್ಟ್ರೀಯ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಈ ಸಂಸ್ಥೆಯನ್ನು ಪ್ರಾರಂಭಿಸಿದೆ. ಪ್ರಾರಂಭದ ದಿನದಲ್ಲಿಯೂ ತಾನು ಇದರ ಜೊತೆ ಜೋಡಿಸಿಕೊಂಡು ಸಲಹೆ ಮಾರ್ಗದರ್ಶನ ನೀಡುತ್ತಿದ್ದೇನೆ. ಈ ಸಂಸ್ಥೆ ಮುಂದಿನ ದಿನಗಳಲ್ಲಿ ಒಂದು ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾಯ್ಕ್ ವಿದ್ಯಾರ್ಥಿಗಳು ಮತ್ತುಅವರ ಪೋಷಕರು ಈ ಶಿಕ್ಷಣ ಸಂಸ್ಥೆಯ ಪ್ರೋತ್ಸಾಹಕರು. ಆ ಪೋಷಕರ ಮಾರ್ಗದರ್ಶನದಲ್ಲಿ ಸಂಸ್ಥೆಯನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಸಂಕಲ್ಪ ಮಾಡಿದ್ದೇವೆ. ಈ ಸಂಸ್ಥೆಯ ಅಧ್ಯಾಪಕ ವೃಂದ ಭೋಧಕೇತ್ತರ ವೃಂದ ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಈ ವಾರ್ಷಿಕೋತ್ಸವ ಸಂದರ್ಭದಲ್ಲಿಅಭಿನಂದಿಸುತ್ತೇನೆ ಇನ್ನು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಸಂಸ್ಥೆಯನ್ನುಇನ್ನುಎತ್ತರಕ್ಕೆ ಬೆಳೆಸುವ ಕೆಲಸ ಮಾಡುತ್ತೇವೆಂದು ಹೇಳಿದರು.

ಶಕ್ತಿ ಕ್ರೀಡಾಕೂಟ ಇತರೆ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ ನಾಕ್, ಟ್ರಸ್ಟಿ ಸಗುಣ ಸಿ.ನಾಯ್ಕ್, ಸಂಸ್ಥೆಯ ಟ್ರಸ್ಟಿ ಮುರಳೀಧರ್ ನಾಯ್ಕ್, ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್.ಕೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವಾರ್ಷಿಕ ವರದಿಯನ್ನು ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ನೀಮಾ ಸಕ್ಸೇನಾ, ಶಕ್ತಿ ವಸತಿಯುಕ್ತ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಹಾಗೂ ಶಕ್ತಿ ಪ.ಪೂ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್ ವಾಚಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಸ್ವಾಗತಿಸಿ, ಸಂಸ್ಥೆಯ ಅಭಿವೃದ್ಧಿಅಧಿಕಾರಿ ನಸೀಮ್ ಬಾನು ವಂದಿಸಿ, ಅಧ್ಯಾಪಕಿ ಶ್ರೀಮತಿ ಸ್ವಾತಿ ಮತ್ತು ಶ್ರೀಮತಿ ದಿವ್ಯಶ್ರೀ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

About School

Shakthi Preschool

Welcome to Shakthi Preschool, a progressive year-round preschool providing a...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...