Call Us :
+91 96860 00046
+91 0824 2230452
info@shakthi.edu.in

ಜಾತಿ, ಮತ ಭೇದ ಭಾವವನ್ನು ಮೀರಿ ನಿಂತ ಬಸವಣ್ಣ – ಜಗನ್ನಾಥಪ್ಪ ಪನ್ಸಾಲೆ

ಮಂಗಳೂರು ನ. 18 : ಶಕ್ತಿನಗರದ ಶಕ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಮಹಾಜಗದ್ಗುರು ಬಸವಣ್ಣ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಸಹಯೋಗದೊಂದಿಗೆ ಇಂದು ಅನುಭಾವ ಸಂಗಮ ಕಾರ್ಯಕ್ರಮದಲ್ಲಿ ವಚನಗಳಲ್ಲಿ ಜೀವನ ಮೌಲ್ಯಗಳು ಎಂಬ ಉಪನ್ಯಾಸದ ಉದ್ಘಾಟನೆಯು ಶಕ್ತಿನಗರದಲ್ಲಿ ನೆರೆವೇರಿತು. ಕಾರ್ಯಕ್ರಮದಲ್ಲಿ ಶರಣ ಜಗನ್ನಾಥಪ್ಪ ಪನ್ಸಾಲೆ ಜನವಾಡಾ ಇವರು ಉಪನ್ಯಾಸ ನೀಡುತ್ತಾ 1156 ರಲ್ಲಿ ಅನುಭಾವ ಮಂಟಪದ ರಚನೆಯನ್ನು ಬಸವಣ್ಣನವರು ಮಾಡಿದರು. ಈ ಮಂಟಪದಲ್ಲಿ ಜೀವನ ಮೌಲ್ಯಗಳ ಕುರಿತಂತೆ ಚರ್ಚೆಗಳು, ಟೀಕೆಗಳು ನಡೆಯತ್ತಿತ್ತು. ಅಂತಿಮವಾಗಿ ಒಂದು ನಿರ್ದಾರಕ್ಕೆ ಶರಣರು ಬರುತ್ತಿದ್ದರು. 12ನೇ ಶತಮಾನದಲ್ಲಿ ಬಸವಣ್ಣವರು 770 ವಿವಿಧ ಕಾಯಕಗಳನ್ನು ಮಾಡುವ ಪಂಗಡಗಳ ನಾಯಕರನ್ನು ಸೇರಿಸಿ ಚಿಂತನೆ, ಗೋಷ್ಠಿಯನ್ನು ನಡೆಸಿ ತನ್ನ ವಿಚಾರವನ್ನು ವ್ಯಕ್ತಪಡಿಸುತ್ತಿದ್ದರು.

ಅಂದು ದೇಶದ ಉದ್ದಗಲದಿಂದ 1,96,000 ಶರಣರು ವಿಚಾರ ವಿನಿಮಯವನ್ನು ಮಾಡಿಕೊಳ್ಳುತ್ತಿದ್ದರು. ಶರಣರ ಮೂಲಕ ಬಸವಣ್ಣವರು ವಚನಗಳನ್ನು ಸ್ಪಷ್ಠಿಸುತ್ತಿದ್ದರು. ಒಂದೊಂದು ವಚನವು ನಿಜ ಜೀವನದ ಮೌಲ್ಯಗಳನ್ನು ಎತ್ತಿ ತೋರಿಸುತ್ತಿತ್ತು. ಜಾತಿ ಮತ ಭೇದ ಭಾವವನ್ನು ಮಿರಿ ನಿಲ್ಲುತ್ತಿತ್ತು. ಅಂದಿನ ಕಾಲದಲ್ಲಿಯು ರಾಜಕೀಯ, ಶೈಕ್ಷಣಿಕ, ಆರ್ಥಿಕ, ನೈತಿಕ, ಆದ್ಯಾತ್ಮಿಕ ಚಿಂತನೆಗಳಿಗೆ ವಿಶೇಷ ಒತ್ತು ನೀಡಲಾಗುತ್ತಿತ್ತು. ಕೆಲಸ ಮಾಡುವುದರಿಂದ ಮಾತ್ರ ಹೊಟ್ಟೆ ತುಂಬುತ್ತದೆ ಎಂಬುವುದು ಬಸವಣ್ಣವರ ವಚನದಲ್ಲಿರುವ ಮಹತ್ವದ ವಿಚಾರ ಎಂದು ಜಗನ್ನಾಥ ಪನ್ಸಾಲೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ಪ ಪೂ ಕಾಲೇಜಿನ ಪ್ರಾಚಾರ್ಯರಾದ ಪ್ರಭಾಕರ ಜಿ.ಎಸ್ ಮಾತನಾಡಿ ನಾವು ಬಸವಣ್ಣವರ ಆಚಾರ ವಿಚಾರವನ್ನು ಅಳವಡಿಸಿಕೊಂಡಾಗ ಮಾತ್ರ ಜೀವನ ಮೌಲ್ಯಗಳ ಸುಧಾರಣೆ ಸಾಧ್ಯ ಎಂದು ಹೇಳಿದರು. ಕಾಯಕವೇ ಕೈಲಾಸವಾಗಬೇಕು. ದುಡಿದು ತಿನ್ನುವ ಪ್ರವೃತಿಯನ್ನು ಬೆಳೆಸಿಕೊಂಡಾಗ ಮಾತ್ರ ಬಸವಣ್ಣವರ ವಚನಗಳನ್ನು ರೂಢಿಸಿಕೊಂಡಾಗೆ ಆಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ ನಾಯ್ಕ್, ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಸದಸ್ಯೆ ಶ್ರೀ ಸಗುಣ ಸಿ. ನಾಯ್ಕ್, ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತುಳು, ಕನ್ನಡ ವಚನಗಳ ಗಾಯನವು ಇಂಚರ ತಂಡ ಉರ್ವಾ ಇವರಿಂದ ನೆರವೇರಿತು. ನಿರುಪಣೆಯನ್ನು ಶಕ್ತಿ ಪ ಪೂ ಉಪನ್ಯಾಸಕಿ ಶಶಿಕಲಾ, ಸ್ವಾಗತವನ್ನು ಸುಪ್ರಿಯ ಮತ್ತು ವಂದನಾರ್ಪಣೆಯನ್ನು ನಿರಂಜನ್ ನೆರೆವೇರಿಸಿದರು.

About School

Shakthi Preschool

Welcome to Shakthi Preschool, a progressive year-round preschool providing a...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...