Call Us :
+91 96860 00046
+91 0824 2230452
info@shakthi.edu.in

ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಪೋಷಕರಿಂದ ಸಹಭೋಜನ ಕಾರ್ಯಕ್ರಮ

ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಶಕ್ತಿ ಪೂರ್ವ ಪ್ರಾಥಮಿಕ ಶಾಲಾ ವಿಭಾಗದ ಎಲ್ಲಾ ಪೋಷಕರಿಂದ ಇಂದು ಸಹಭೋಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ ನಾಕ್ ಅವರ ಶುಭ ಹಾರೈಕೆಯೊಂದಿಗೆ ಕಾರ್ಯಕ್ರಮವು ಉದ್ಘಾಟಣೆಗೊಂಡಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಪ್ರಧಾನ ಸಲಹೆಗಾರರಾದ ರಮೇಶ್ ಕೆ ಮಾತನಾಡಿ ಶಕ್ತಿ ವಿದ್ಯಾ ಸಂಸ್ಥೆಯು ಅನೇಕ ವರ್ಷಗಳಿಂದ ಸಹಭೋಜನ ಕಾರ್ಯಕ್ರಮವನ್ನು ಪೋಷಕರ ಸಹಕಾರದೊಂದಿಗೆ ಆಯೋಜಿಸಿಕೊಂಡು ಬರುತ್ತಿದೆ. ಶಕ್ತಿ ವಿದ್ಯಾ ಸಂಸ್ಥೆಯು ವಿದ್ಯಾ ಭಾರತಿಯ ಜೊತೆ ಸಂಲಗ್ನಗೊಂಡಿರುವುದರಿಂದ ಅನೇಕ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರವನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವ ಕೆಲಸವನ್ನು ಮಾಡುತ್ತಿದೆ. ಈ ವರ್ಷ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ೧೦೦ವರ್ಷ ಪೂರೈಸಿರುವ ಸಂದರ್ಭದಲ್ಲಿ ವಿದ್ಯಾಭಾರತಿಯು ಪಂಚ ಪರಿವರ್ತನೆಗಳಾದ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಭೋದನ, ಪರಿಸರ ಸಂರಕ್ಷಣೆ, ಸ್ವದೇಶಿ ಮತ್ತು ನಾಗರೀಕ ಶಿಷ್ಟಾಚಾರ ವಿಷಯಗಳಿಗೆ ಹೆಚ್ಚಿನ ಒತ್ತನ್ನು ಕೊಡುತ್ತಿದೆ. ಈ ೫ ವಿಷಯಗಳಿಗೆ ಸಂಬಂಧಪಟ್ಟಂತೆ ನಮ್ಮೆಲ್ಲರ ಪೋಷಕರು ಮನೆಯಲ್ಲಿ ಇದನ್ನು ದಿನನಿತ್ಯ ಅಳವಡಿಸಿಕೊಂಡರೆ ನಮ್ಮ ದೇಶ ಉನ್ನತಿಯನ್ನು ಹಾಗೂ ಪ್ರಗತಿಯನ್ನು ಹೊಂದಲು ಸಾಧ್ಯವಿದೆ. ಅದಕ್ಕೋಸ್ಕರ ನಮ್ಮ ಮನೆಯಲ್ಲಿ ಹಾಗೂ ಶಾಲೆಯಲ್ಲಿ ಸಾಮಾಜಿಕ ಸಾಮರಸ್ಯವನ್ನು ತರುವ ಸಹಭೋಜನದ ಕಲ್ಪನೆಯನ್ನು ಶಕ್ತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ನಾವೆಲ್ಲರೂ ಜಾತಿ, ಮತ, ಪಂಥವನ್ನು ಮೀರಿ ಮುನ್ನಡೆಯಬೇಕೆಂದು ಕರೆ ಕೊಟ್ಟರು.

ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತ ಸೂರಜ್ ಮಾತನಾಡಿ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯು ನಿರಂತರವಾಗಿ ಮಕ್ಕಳಲ್ಲಿ ಪಠ್ಯದ ಜೊತೆ ಸಂಸ್ಕಾರದ ಭಾಗವನ್ನು ಭೋಧಿಸಿಕೊಂಡು ಬರುತ್ತಿದೆ. ಇದನ್ನು ತಮ್ಮ ಮನೆಯಲ್ಲಿಯೂ ಅಳವಡಿಸಬೇಕೆಂಬುದು ನಮ್ಮ ಆಶಯ. ಇವತ್ತಿನ ಕಾರ್ಯಕ್ರಮವನ್ನು ಸುಂದರವಾಗಿ ಆಯೋಜನೆಮಾಡಿರುವ ಪೋಷಕರಿಗೆ ವಂದನೆಯನ್ನು ತಿಳಿಸಿದರು.

ಸಭಾ ಕಾರ್ಯಕ್ರಮದ ನಂತರ ಶಾಲೆಯ ಅನೇಕ ಪೋಷಕರ ನೃತ್ಯ ಮತ್ತು ಮನೋರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸ್ವಾಗತವನ್ನು ಪೋಷಕರಾದ ಶ್ರೀಮತಿ ಶ್ವೇತಾ ಕೊಟ್ಟಾರಿ, ಧನ್ಯವಾದವನ್ನು ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ಸುಷ್ಮ ಸತೀಶ್ ಹಾಗೂ ಮಾನಸ ಅವರು ನಿರೂಪಿಸಿದರು.

ಕಾರ್ಯಕ್ರಮದ ನಂತರ ಎಲ್ಲಾ ಪೋಷಕರ ಮನೆಯಿಂದ ತಂದಿರುವ ವಿವಿಧ ಬಗೆಯ ಅಡುಗೆಯನ್ನು ಸಾಮೂಹಿಕವಾಗಿ ಬಡಿಸಿ, ಸಹಭೋಜನವನ್ನು ಒಟ್ಟಾಗಿ ಸವಿಯಲಾಯಿತು. ಈ ಕಾರ್ಯಕ್ರಮದಲ್ಲಿ ಒಟ್ಟು ೨೦೦ಕ್ಕೂ ಅಧಿಕ ಪೋಷಕರು ಭಾಗವಹಿಸಿದರು.

About School

Shakthi Preschool

Welcome to Shakthi Preschool, a progressive year-round preschool providing a...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...