Call Us :
+91 96860 00046
+91 0824 2230452
info@shakthi.edu.in

’ಶಕ್ತಿ ಕ್ಯಾನ್‌ಕ್ರಿಯೇಟ್’ ಶಿಬಿರದ ಸಮಾರೋಪ

ರಜಾಕಾಲದ ಶಿಬಿರಗಳು ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸಲು ಪೂರ್ಣ ಸಹಕಾರಿ –  ಮಹಾಬಲೇಶ್ವರ ಎಂ.ಎಸ್

ಶಕ್ತಿನಗರ: ರಜಾಕಾಲದಲ್ಲಿ ಹಮ್ಮಿಕೊಳ್ಳುವ ಶಿಬಿರಗಳು ಮಕ್ಕಳ ವ್ಯಕ್ತಿತ್ವರೂಪಿಸಲು ಹಾಗೂ ಅವರಲ್ಲಿ ಹುದುಗಿರುವ ಸುಪ್ತ ಪ್ರತಿಭೆಗಳನ್ನು ಹೊರಗೆಳೆಯಲು ಪೂರ್ಣ ಸಹಕಾರಿಯಾಗುತ್ತಿವೆ ಎಂದು ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಕಾರ್ಯನಿರ್ವಹಣಾಧಿಕಾರಿ ಶ್ರೀ ಮಹಾಬಲೇಶ್ವರ ಎಂ.ಎಸ್. ಹೇಳಿದರು.

ಮಂಗಳೂರು ಶಕ್ತಿನಗರದ ಶಕ್ತಿ ವಸತಿ ಶಾಲೆಯವರು ಬೇಸಿಗೆ ರಜಾಕಾಲದಲ್ಲಿ ಹಮ್ಮಿಕೊಂಡಿದ್ದ 20 ದಿನಗಳ ಕಾಲದ ಶಿಬಿರ ’ಶಕ್ತಿ ಕ್ಯಾನ್‌ಕ್ರಿಯೇಟ್’ ಇದರ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಕ್ಕಳ ಪ್ರತಿಭೆ, ಕೌಶಲ್ಯ, ಮಾನವ ಸಂಪನ್ಮೂಲ ಹಾಗೂ ಮೌಲ್ಯಗಳನ್ನು ಪೋಷಿಸುವ ಕೆಲಸವನ್ನು ಶಿಕ್ಷಕರು ಹಾಗೂ ಪೋಷಕರು ನಿರಂತರವಾಗಿ ಮಾಡಿದರೆ ಒಟ್ಟು ರಾಷ್ಟ್ರದ ಸಂಪನ್ಮೂಲವನ್ನು ಹೆಚ್ಚಿಸಿದಂತೆ ಆಗುತ್ತದೆ, ಅದೇ ಶಿಕ್ಷಣದ ಮೂಲ ಉದ್ದೇಶ ಎಂದು ಅವರು ಹೇಳಿದರು.

ನಾಡಿನ ಹೆಸರಾಂತ ಭರತನಾಟ್ಯ ಕಲಾವಿದೆ ಹಾಗೂ ಶಿಕ್ಷಕಿ ಶ್ರೀಮತಿ ಸುಮಂಗಳಾ ರತ್ನಾಕರ್ ಮಾತನಾಡುತ್ತಾ ಮಕ್ಕಳ ಪ್ರತಿಭೆಗೆ ಅವಕಾಶ ಹಾಗೂ ವೇದಿಕೆಗಳನ್ನು ಒದಗಿಸುವ ಕಾರ್ಯ ಶಿಕ್ಷಕರು ಹಾಗೂ ಹೆತ್ತವರು ಮಾಡುತ್ತಾ ಬಂದಲ್ಲಿ ಮಕ್ಕಳು ದೇಶಕ್ಕೆ ಒಂದು ಆಸ್ತಿಯಾಗಬಲ್ಲರು ಎಂದು ನುಡಿದರು.

ಮಂಗಳೂರು ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಶ್ರೀಮತಿ ಶಕುಂತಲಾ ಆರ್‌. ಕಿಣಿ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ವ್ಯವಸ್ಥಿತವಾಗಿ ಹಮ್ಮಿಕೊಂಡ ಶಿಬಿರದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಶಕ್ತಿ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಸಂಜಿತ್ ನಾೖಕ್‌ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಶಿಕ್ಷಣದಲ್ಲಿ ಪಠ್ಯ ಹಾಗೂ ಪಠ್ಯೇತರ ವಿಷಯಗಳಿಗೆ ಸಮಾನ ಆದ್ಯತೆ ನೀಡಬೇಕೆಂದು ಕರೆಯಿತ್ತರು.

ಆರಂಭದಲ್ಲಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತ ಬಯಸಿದರು. ನಸೀಮ್ ಬಾನು ಅತಿಥಿಗಳನ್ನು ಪರಿಚಯಿಸಿದರು. ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಹಾಗೂ ಜಾನಪದ ವಿದ್ವಾಂಸ ರಮೇಶ್‌ ಕಲ್ಮಾಡಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಶಿಬಿರಾಧಿಕಾರಿ ಪೂರ್ಣಿಮ ಆರ್. ಶೆಟ್ಟಿ ಶಿಬಿರದ ವರದಿ ಒಪ್ಪಿಸಿ, ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಶಿಬಿರದ ಯಶಸ್ವಿಗೆ ಕಾರಣಕರ್ತರಾದವರನ್ನು ಅಭಿನಂದಿಸಿ ಮಾತನಾಡಿದರು. ಶಿಕ್ಷಕಿ ಸ್ವಾತಿ ಭರತ್‌ ಕಾರ್ಯಕ್ರಮ ನಿರೂಪಿಸಿದರು.

About School

Shakthi Preschool

Welcome to Shakthi Preschool, a progressive year-round preschool providing a...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...