ಮಂಗಳೂರು ಜುಲೈ 29 : ಮಂಗಳೂರಿನ ಶಕ್ತಿ ನಗರದ ಶಕ್ತಿಪೂರ್ವ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಹುಲಿಯ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತು. 4 ವರ್ಷದಿಂದ 5 ವರ್ಷದೊಳಗಿನ ಮಕ್ಕಳು ಹುಲಿ ವೇಷವನ್ನು ಧರಿಸಿ ವಿವಿಧ ಹುಲಿ ಹಾಡಿಗೆ ಕುಣಿದಿರುವುದು ವಿಶೇಷವಾಗಿತ್ತು. ಇದು ನೆರೆದಿರುವ ಪೋಷಕರು ಮತ್ತು ಶಿಕ್ಷಕರನ್ನು ಸಂಭ್ರಮಿಸುವಂತೆ ಮಾಡಿತು.
ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ಶ್ರೀಮತಿ ಸುಷ್ಮಾ ಸತೀಶ್ ಅವರು ಮಕ್ಕಳಿಗೆ ಅಂತಾರಾಷ್ಟ್ರೀಯ ಹುಲಿಯ ದಿನದ ಮಹತ್ವವನ್ನು ವಿವರಿಸಿದರು. ಹುಲಿಯ ಸಂರಕ್ಷಣೆ ಮತ್ತು ಜಾಗೃತಿಯ ಮಹತ್ವವನ್ನು ಒತ್ತಿ ಹೇಳಿದರು. ಹುಲಿಯ ರಕ್ಷಣೆಯ ಕುರಿತಂತೆ ಜಾಗೃತಿ ಮೂಡಿಸುವ ಫಲಕಗಳನ್ನು ಪ್ರದರ್ಶಿಸಲಾಯಿತು.
ಶಿಕ್ಷಕರು ಪುಣ್ಯಕೋಟಿ ಮತ್ತು ಹುಲಿ ಎಂಬ ಮಹಾಕಾವ್ಯದ ಕಥೆಯನ್ನು ಒಳಗೊಂಡ ಆಕರ್ಷಕ ನೃತ್ಯ ನಾಟಕವನ್ನು ಪ್ರದರ್ಶಿಸಿದರು. ಮಕ್ಕಳು ನಾಟಕ ಮತ್ತು ನೃತ್ಯವನ್ನು ನೋಡಿ ಆನಂದಿಸಿದರು. ಮಕ್ಕಳಿಂದ ಅದ್ಬುತ ಹುಲಿಯ ನೃತ್ಯ ಪ್ರದರ್ಶನದೊಂದಿಗೆ ಕಾರ್ಯಕ್ರಮವು ಅಂತ್ಯವಾಯಿತು. ಇದು ಮಕ್ಕಳ ಪ್ರತಿಭೆಯನ್ನು ಗುರುತಿಸುವ ವೇದಿಕೆಯಾಗಿ ಕಂಡಿತು.
ಕಾರ್ಯಕ್ರಮದಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಕೆ. ಸಿ. ನಾೖಕ್, ಪ್ರಧಾನ ಸಲಹೆಗಾರ ಶ್ರೀ ರಮೇಶ್ ಕೆ. ಮತ್ತು ಶಕ್ತಿ ರೆಸಿಡೆನ್ಯಿಯಲ್ ಶಾಲೆ ಪ್ರಾಂಶುಪಾಲೆ ಶ್ರೀಮತಿ ಬಬಿತಾ ಸೂರಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.